ಕಿಟಕಿ ಕಲ್ಲು

 ಮನೆಗಳ ಗೋಡೆಗಳಲ್ಲಿ ಕಿಟಕಿಗಳ ಮೇಲುಗಡೆಯೂ ಬಾಗಿಲುಗಳ ಮೇಲುಗಡೆಯೂ ಎಳೆದಿರುವ ಚಪ್ಪಡಿ (ಲಿಂಟಲ್). ಮೇಲಿನ ಕಟ್ಟಡದ ಭಾರ ಈ ಚಪ್ಪಡಿಗಳ ಮೂಲಕ ಪಕ್ಕದ ಗೋಡೆಯ ಮೇಲೆ ಎರಗಿ, ಕೆಳಕ್ಕೆ ಇಳಿದು ಕಟ್ಟಡದ ಅಡಿಪಾಯವನ್ನು ಸೇರುತ್ತದೆ. ಹಿಂದೆ ಕಲ್ಲಿನ ಚಪ್ಪಡಿಗಳನ್ನು ಬಹು ಸಾಮಾನ್ಯವಾಗಿ ಬಳಸುತ್ತಿದ್ದರು. ಈಗ ಪ್ರಚಲಿತ ಕಾಂಕ್ರೀಟಿನ ಉಪಯೋಗವು ಸರ್ವ ಸಾಮಾನ್ಯವಾಗಿದೆ.      

    (ಎಚ್.ಸಿ.ಕೆ.)

(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ